ಹೊಸ ಯೋಜನೆಗಳಿಗೆ ಹಣವಿಲ್ಲ ಎಂದ ಆರ್ಥಿಕ ಇಲಾಖೆ: 'ಯಾವ ಯೋಜನೆ ಕಟ್ ಮಾಡಬೇಕು, ಯಾವುದು ಬೇಕು ಅಂತ ನನಗೆ ಗೊತ್ತಿದೆ' ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು.!

(Santhoshvani.com)

ಬೆಂಗಳೂರು: ಹೊಸ ಯೋಜನೆಗಳಿಗೆ ತೀವ್ರ ಹಣಕಾಸು ಕೊರತೆಯ ಆತಂಕವನ್ನು ವ್ಯಕ್ತಪಡಿಸಿರುವ ಆರ್ಥಿಕ ಇಲಾಖೆಯು, ಪ್ರಸ್ತುತ ರಾಜ್ಯದ ಹಣಕಾಸಿನ ವ್ಯತಿರಿಕ್ತ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ವಿವರಣೆ ನೀಡಿದೆ. ಮಂಗಳೂರಿನಲ್ಲಿ ಮೊನ್ನೆ ನಡೆದ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 15,000 ಕಿ.ಮೀ ರಸ್ತೆಗಳನ್ನು 10 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಹೆಚ್ಚುವರಿ ಅನುದಾನದ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಈ ಹೊಸ ಯೋಜನೆ ಪ್ರಸ್ತಾವನೆ ಸಂಬಂಧ ಆರ್ಥಿಕ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ಯೋಜನೆಗಳಿಗೆ ಅನುದಾನ ನೀಡಲು ಹಣದ ಕೊರತೆಯ ಬಗ್ಗೆ ವಿವರಿಸಿದ್ದು, ರಾಜ್ಯದ ಹಣಕಾಸು ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಸರ್ಕಾರದ ಮುಂದಿಟ್ಟಿದೆ. ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರು ಆರ್ಥಿಕ ಇಲಾಖೆ ವ್ಯಕ್ತಪಡಿಸಿದ ಅಭಿಪ್ರಾಯದ ದಾಖಲೆಯನ್ನು ವಿಧಾನಸೌಧದ ಹೊರಗಡೆ ಇಂದು ಬಿಡುಗಡೆ ಮಾಡಿದ್ದಾರೆ.  

​ಹಣಕಾಸು ಇಲಾಖೆಯ ಆಕ್ಷೇಪ ಏನು?: 2026-27 ಹಾಗೂ 2027-28ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಹೊಸ ಯೋಜನೆಗಳ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ಸುಮಾರು 10,000 ಕೋಟಿ ವೆಚ್ಚಕ್ಕಾಗಿ ಅನುದಾನದ ಬೇಡಿಕೆ ಇಟ್ಟಿದೆ. ಆದರೆ ಬಜೆಟ್‌ನಲ್ಲಿ ಈ ಹೊಸ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿಲ್ಲ. ಈ ಹೊಸ ಯೋಜನೆಗಳಿಂದಿತ್ತೀಯ ನಿರ್ವಹಣೆ ಹಾಗೂ ಹಣದ ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರ್ಥಿಕ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಈಗಾಗಲೇ ತನ್ನ ಸಾಲು ಪಡೆಯುವ ಗರಿಷ್ಠ ಮಿತಿಯನ್ನು ಮುಟ್ಟಿದೆ. ಹೀಗಾಗಿ ಹೊಸ ಯೋಜನೆಗಳಿಗೆ ಸಾಲ ಪಡೆಯುವ ಅವಕಾಶವಿಲ್ಲ. ಈಗಾಗಲೇ ಸುಮಾರು ಎರಡು ಲಕ್ಷ ಕೋಟಿ ವೆಚ್ಚದ ಕಾಮಗಾರಿಗಳು ಬಾಕಿ ಇವೆ. ಇನ್ನು ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಟ್ಟು 36,136 ಕೋಟಿ ಬಾಕಿ ಬಿಲ್ ಹೊಂದಿವೆ ಎಂದು ತಿಳಿಸಿದೆ.












Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು