ಆಸ್ತಿ ವಿವಾದಕ್ಕೆ ಗ್ರಾಮ ಪಂಚಾಯತ್ ಕಚೇರಿಯಲ್ಲೇ ಮಾಜಿ ಯೋಧ ಹಾಗೂ ಪುತ್ರಿ ಭೀಕರ ಹತ್ಯೆ!

ಳಳ

(Santhoshvani.com)

ಬೆಳಗಾವಿ: ಆಸ್ತಿ ಪಾಲು ಹಾಗೂ ಜಮೀನು ಹಂಚಿಕೆ ವಿಚಾರವಾಗಿ ಕುಟುಂಬದ ನಡುವೆ ಹಲವು ದಿನಗಳಿಂದ ಕಕಾಸುಗೊಂಡಿದ್ದ ವಿವಾದವು ಬುಧವಾರ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಜಮೀನು ದಾಖಲೆ ಪ್ರಕ್ರಿಯೆಗಾಗಿ ಗ್ರಾಮ ಪಂಚಾಯಿತಿಗೆ ಬಂದಿದ್ದ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ವರದಿಯಾಗಿದೆ.

​ಘಟನೆಯಲ್ಲಿ ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

​ನಡೆದಿದ್ಡೇನು?

38 ಗುಂಟೆ ಜಮೀನು ಹಂಚಿಕೆ ವಿಚಾರವಾಗಿ ರುದ್ರಪ್ಪ ಕುಂದರಗಿ ಹಾಗೂ ಅವರ ಸಹೋದರರ ನಡುವೆ ದೀರ್ಘಕಾಲದಿಂದ ವಿವಾದವಿತ್ತು ಎಂದು ತಿಳಿದುಬಂದಿದೆ. ಬುಧವಾರ ಜಮೀನು ದಾಖಲೆ ಪ್ರಕ್ರಿಯೆ ಸಂಬಂಧ ರುದ್ರಪ್ಪ ಅವರು ಅವರಾದಿ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬದ ಸದಸ್ಯರು, ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

​ಕೊಡಲಿ ಹಾಗೂ ಕುಡಗೋಲುಗಳಿಂದ ಮನಬಂದಂತೆ ನಡೆಸಿದ ಈ ಭೀಕರ ದಾಳಿಯಲ್ಲಿ ರುದ್ರಪ್ಪ ಕುಂದರಗಿ ಅವರು ಪಂಚಾಯಿತಿ ಆವರಣದಲ್ಲೇ ಅಸುನೀಗಿದ್ದಾರೆ. ತಂದೆಯನ್ನು ರಕ್ಷಿಸಲು ಮುಂದಾಗಿ ಅಡ್ಡಬಂದ ಪುತ್ರಿ ಶಶಿಕಲಾ ಅವರ ಮೇೆಯೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರು ಕೂಡ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಈ ವೇಳೆ ದಾಳಿಯನ್ನು ತಡೆಯಲು ಯತ್ನಿಸಿದ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಹಲ್ಲೆಯಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

​ಪೊಲೀಸರ ತನಿಖೆ ಚುರುಕು:

ದಿನದ ಬೆಳಕು ಹರಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲೇ ನಡೆದ ಈ ಅವಳಿ ಕೊಲೆ ಪ್ರಕರಣವು ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಆತಂಕ ಹಾಗೂ ಸದ್ದು ಮಾಡಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.







Santhoshvani digital Daily News Network

 ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು