(Santhoshvani.com)
ಸಿಂಧನೂರು:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನರೇಗಾ ಯಡಿ ಬಾಕಿ ಕೂಲಿ ಹಣ ಪಾವತಿಸುವುದು, ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಸರಿಯಾದ ಅಳತೆ ಮತ್ತು ಕರ್ತವ್ಯ ಲೋಪ ಎಸಗಿರುವ ಪಿಡಿಒ ಹಾಗೂ ಬಿ ಎಫ್ ಟಿ, ವಿರುದ್ಧ ಕ್ರಮ ಕೈಗೊಂಡು ವರ್ಗಾವಣೆ ಮಾಡುವ ಕುರಿತು ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ತಾಲೂಕ ಪಂಚಾಯತಿ ಎಡಿ, ಯಂಕಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ ತಿಳಿಸಿದರು.
ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ಅಖಿಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕರ ಸಂಘ ಸಂಯೋಜಿತ ಸಿಂಧನೂರು ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಗುಡ್ಡ ಗ್ರಾಮದ ನರೇಗಾ ಕೂಲಿಕಾರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವಿವಿಧ ಕಾಮಗಾರಿಗಳಲ್ಲಿ ಕೆಲಸ ನೀಡಲಾಗಿದೆ ಆದರೆ, ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸಂಬಂಧಪಟ್ಟ ಉದ್ಯೋಗ ಖಾತರಿ ಯೋಜನೆಯ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸದೆ ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ಅಗತ್ಯ
ಮಾರ್ಗದರ್ಶನ ನೀಡದೆ, ಕಾಮಗಾರಿಯ ಸರಿಯಾದ ಅಳತೆ ಮಾಡದೇ ಮತ್ತು ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಕೂಲಿ ಲೆಕ್ಕ ಹಾಕದೇ ನಿರ್ಲಕ್ಷ್ಯ ವಹಿಸಲಾಗಿದೆ.ಇದರಿಂದ ಕೂಲಿಕಾರರಿಗೆ ಸರ್ಕಾರ ನಿಗದಿಪಡಿಸಿರುವ ಕೂಲಿ ದರದ ಬದಲಾಗಿ ಕೇವಲ ೨೨೦ ರೂ ರಷ್ಟು ಕೂಲಿ ಲೆಕ್ಕ ಹಾಕಲಾಗುತ್ತಿದೆ ಇದರಿಂದ ಬಡ ಗ್ರಾಮೀಣ ಕೂಲಿಕಾರರಿಗೆ ಅನ್ಯಾಯವಾಗಿದ್ದು, ಅವರ ಕುಟುಂಬಗಳ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.
ಆದ್ದರಿಂದ ಈ ಕುರಿತು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ನರೇಗಾ ನಿಯಮಾವಳಿಗಳಂತೆ ಕಾಮಗಾರಿಯ ಅಳತೆ, ಹಾಜರಾತಿ, ಕೆಲಸದ ಪ್ರಮಾಣ ಹಾಗೂ ಕೂಲಿ ಲೆಕ್ಕವನ್ನು ಪರಿಶೀಲಿಸಿ, ಅರ್ಹ ಕೂಲಿಕಾರರಿಗೆ ಬಾಕಿ ಇರುವ ಸಂಪೂರ್ಣ ಕೂಲಿ ಮೊತ್ತವನ್ನು ವಿಳಂಬ ಮಾಡದೆ ಪಾವತಿಸಬೇಕು,ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ಕೂಲಿಕಾರರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅಗತ್ಯವಿದ್ದಲ್ಲಿ ತಕ್ಷಣ ವರ್ಗಾವಣೆ ಮಾಡಿ ಕೂಲಿಕಾರರಿಗೆ ನ್ಯಾಯಯುತವಾಗಿ ಸಹಕರಿಸುವ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಬೇಕು ಈ ಕುರಿತು ಕೈಗೊಂಡ ಕ್ರಮದ ಲಿಖಿತ ಮಾಹಿತಿಯನ್ನು ಕೂಲಿಕಾರರಿಗೆ ಮತ್ತು ಸಂಘದ ತಾಲೂಕ ಸಮಿತಿಗೆ ನೀಡಬೇಕು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿ ಕೂಲಿಕಾರರಿಗೆ ಬರಬೇಕಾದ ಸಂಪೂರ್ಣ ಕೂಲಿ ಹಣವನ್ನು ಪಾವತಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಮಾನ್ಯ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಸಿಂಧನೂರು ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಶಂಕ್ರಪ್ಪ. ಕಾರ್ಯದರ್ಶಿ ಅಪ್ಪಣ್ಣ ಕಂಬಳೆ. ಎಲ್ಲಪ್ಪ ಮೇಟಿ. ದಾಸಪ್ಪ. ಮೌನೇಶ್. ನಾಗಪ್ಪ, ಸಣ್ಣ ಬಸವರಾಜ. ಈರಪ್ಪ. ಯಂಕಪ್ಪ ಚಳ್ಳೂರು. ಮರಿಗೌಡ, ಯಂಕಪ್ಪ ದೊಡ್ಡಮನಿ. ಸತ್ಯನಾರಾಯಣ. ಬಸವರಾಜ ದೊಡ್ಡಮನಿ, ಮಲ್ಲಿಕಾರ್ಜುನ. ದುರ್ಗಪ್ಪ ದೊಡ್ಡಮನಿ, ಮಲ್ಲೇಶ ಗೌಡ. ಸೇರಿದಂತೆ ಅನೇಕರು.ಉಪಸ್ಥಿತರಿದ್ದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು