ಪ್ರವಾಹ ಪೀಡಿತ ನೇಪಾಳಕ್ಕೆ ಭಾರತ ನೆರವು

image source -facebook


(santhoshvani.com)

ನವದೆಹಲಿ:ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನೆರೆರಾಷ್ಟ್ರ ನೇಪಾಳಕ್ಕೆ ಭಾರತ ನೆರವು ನೀಡುತ್ತಿದ್ದು, ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ೨ನೇ ವಿಮಾನವನ್ನು ರವಾನಿಸಿದೆ.ಭಾರತೀಯ ವಾಯುಪಡೆಯ ಮಿಲಿಟರಿ ಸಾರಿಗೆ ವಿಮಾನದ ಮೂಲಕ ಒಟ್ಟು ೩೭ ೫ ಟನ್ ತೂಕದ ಮಾನವೀಯ ನೆರವು, ವಿಪತ್ತು ಪರಿಹಾರ HADR ಸಾಮಗ್ರಿಗಳು, ತುರ್ತು ಔಷಧಿಗಳು ಹಾಗೂ ಸಿದ್ಧಪಡಿಸಿದ ಆಹಾರ ಪೊಟ್ಟಣಗಳನ್ನು ಕಳುಹಿಸಿಕೊಡಲಾಗಿದೆ.

ನೇಪಾಳ- ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಹಠಾತ್ ಜಲಪ್ರಳಯಕ್ಕೆ ಕನಿಷ್ಠ ಈ ವರೆಗೂ ೧೬೫ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಭಾರತವು ನೆರವಿನ ಹಸ್ತ ಚಾಚಿದೆ ನೆರೆ ಪೀಡಿತ ನೇಪಾಳಕ್ಕೆ ಭಾರತವು ಎರಡನೇ ಹಂತದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ೩೭. ೫ ಟನ್‌ಗಳಷ್ಟು ಮಾನವೀಯ ನೆರವು, ಔಷಧಗಳು ಹಾಗೂ ಆಹಾರ ಪೊಟ್ಟಣಗಳನ್ನು ಹೊತ್ತ ಭಾರತೀಯ ಸೇನೆಯ ವಿಮಾನ ನೇಪಾಳದತ್ತ ಪ್ರಯಾಣ ಬೆಳೆಸಿದೆ.

ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕ‌ರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬುಧವಾರ ೧೦ ಟನ್‌ಗಳಷ್ಟು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ HADR ಸಾಮಗ್ರಿಗಳನ್ನು ಕಳುಹಿಸಿದ ಬಳಿಕ ಇದೀಗ ಎರಡನೇ ವಿಮಾನ ಹೊರಟಿದೆ ಎಂದು ಅವರು ತಿಳಿಸಿದ್ದಾರೆ.








Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು