ಯಶ್‌ ಅಭಿನಯದ ʻಟಾಕ್ಸಿಕ್‌ʼ ಚಿತ್ರದ ಬಹುನಿರೀಕ್ಷಿತ ಟ್ರೈಲರ್‌ ಇಂದು ರಿಲೀಸ್‌ ಆಗಿದೆ.

ಬೆಂಗಳೂರು:  ಯಶ್‌ ಅಭಿನಯದ ʻಟಾಕ್ಸಿಕ್‌ʼ   ಚಿತ್ರದ ಬಹುನಿರೀಕ್ಷಿತ ಟ್ರೈಲರ್‌ ಇಂದು ರಿಲೀಸ್‌ ಆಗಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಡಾರ್ಕ್‌ ಮತ್ತು ಸ್ಟೈಲಿಶ್‌ ಜಗತ್ತಿನ ಮೊದಲ ಝಲಕ್‌ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದು, ರಾಯ ರೂಮಿ ಮತ್ತು ಟಿಕೆಟ್‌ ಪಾತ್ರದಲ್ಲಿ ಯಶ್‌ ಅಬ್ಬರಿಸಿದ್ದಾರೆ.


ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೇಲರ್‌ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವನ್ನುದ್ದೇಶಿಸಿ ಯಶ್‌ ಮಾತನಾಡಿದರು. ದಾರಿ ಯಾವುದಾದ್ರೂ ಆಗಬಹುದು, ಗುರಿ ಮುಟ್ಟಬೇಕು. ಆ ದಾರಿಗಳಲ್ಲಿ ಹೋರಾಟ ಇರುತ್ತೇ, ಹೋರಾಡಿಕೊಂದೇ ಗುರಿ ಮುಟ್ಟಬೇಕು. 

ಕೆಲವೊಮ್ಮೆ ʻಕಾಲಕ್ಕೆ ತಕ್ಕಂತೆ ನಡೀಬೇಕು, ತಾಳಕ್ಕೆ ತಕ್ಕಂತೆ ಕುಣೀಬೇಕುʼ ಎಂದು ಅಣ್ಣಾವ್ರ ಸಿನಿಮಾ ಗೀತೆ ಸಾಲುಗಳನ್ನ ನೆನಪಿಸಿದ್ರು.
ಇದಕ್ಕೂ ಮುನ್ನ ʻಮೊದಲು ನಾನು ಕನ್ನಡದಲ್ಲೇ ಮಾತನಾಡ್ತೀನಿʼ ಎಂದ ಯಶ್‌, 

ಟಾಕ್ಸಿಕ್‌ ಚಿತ್ರಕ್ಕಾಗಿ ಸೇರಿರುವುದಕ್ಕೆ ಮುಖ್ಯ ಕಾರಣ ಕರ್ನಾಟಕದ ಜನತೆ. ಜನ ನನಗೆ ಕೊಟ್ಟಿರೋ ಶಕ್ತಿ, ಜವಾಬ್ದಾರಿ, ಅವರು ಕೊಟ್ಟಿರೋ ಗೆಲುವು, ಪ್ರತಿ ಗೆಲುವು. ಪ್ರತಿ ಸಿನಿಮಾದಲ್ಲಿ ಶಕ್ತಿ ಕೊಟ್ಟಾಗಲೂ, ಹಿಟ್‌ ಮಾಡಿದಾಗಲೂ ಅದು ನನ್ನ ಗೆಲುವಲ್ಲ, ಅಲ್ಲಿ ಕೆಲಸ ಮಾಡು ಅಂತ ನನಗೆ ಕೊಡ್ತಿದ್ದ ಜವಾಬ್ದಾರಿ, ಅಂತ ನಂಬಿದ್ದೀನಿ. ಅದೇ ರೀತಿ ಪ್ರತಿ ಸಿನಿಮಾದಲ್ಲೂ ಕೆಲಸ ಮಾಡ್ತಾ ಮುಂದೆ ಹೆಜ್ಜೆ ಇಟ್ಟು ಬಂದಿದ್ದೀನಿ. ಆಗಲೂ ಪ್ರತಿಯೊಬ್ಬರು ಗೌರವಿಸಿದ್ದೀರಿ ಎಂದು ನೆನೆಸಿಕೊಂಡರು.








Santoshvani Digital Daily News portal

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 

0 ಕಾಮೆಂಟ್‌ಗಳು