(santhoshvani.com)
ಬೆಂಗಳೂರು:ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಲೆ ಮತ್ತು ಅತ್ಯಾಚಾರ ನಡೆದರೂ ಮನ ನೀಡದ ಅಸಮರ್ಥ ಗೃಹ ಸಚಿವರು ಬೇಕಾಗಿಲ್ಲ. ಈಗಿನ ಗೃಹ ಅವರಿಗೆ ಆರೆಸ್‌ಎಸ್ ಉಸ್ತುವಾರಿ ನೀಡಿ ಬೇರೆಯವರನ್ನು ಗೃಹ ಸಚಿವರಾಗಿ ಎಖ್ಯಮಂತ್ರಿಗಳು ನೇಮಿಸಲಿ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಅವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಲಿಂಗಸಗೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಲ್ಯಾಣ ರ್ಕಾಟಕ ಭಾಗವಾಗಿರುವ ರಾಯಚೂರು ಜಿಲ್ಲೆಯಲ್ಲಿ ಕಳೆದ ಹದಿನೈದು ನದಲ್ಲಿ ಮೂರು ಅಹಿತಕರ ಘಟನೆ ನಡೆದಿವೆ. ಅದರಲ್ಲಿ ಒಂದು ದಲಿತ -ಯಕನ ಹತ್ಯೆ ಮತ್ತು ಎರಡು ಅತ್ಯಾಚಾರ ಮತ್ತು ಕೊಲೆ ಪ್ರಕರಣ
ಘಟಿಸಿವೆ. ಆದರೆ ಈ ಬಗ್ಗೆ ಸರ್ಕಾರವಾಗಲಿ ಗೃಹ ಸಚಿವರಾಗಲಿ ಗಮನವೇ ನೀಡಿಲ್ಲ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಅನ್ಯಾಯವಾದಾಗ ರಕ್ಷಣೆಗೆ ಬರಬೇಕಾದ ಕಾಂಗ್ರೆಸ್ ಸರ್ಕಾರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಬರುತ್ತದೆ ಎಂದು ಹೇಳಿದರು. ಇಂತಹ ಘಟನೆಗಳು ಕಲ್ಯಾಣ ಕರ್ನಾಟಕಕ್ಕೆ ಕಪ್ಪು ಚುಕ್ಕೆ. ಈ ಭಾಗದವರೇ ಆಗಿರುವ ಗೃಹ ಸಚಿವರು ಇಲ್ಲಿಗೆ ಬಂದು ಏನಾಗಿದೆ ಎಂದು ನೋಡಲಿಲ್ಲ. ಮೂರು ಹತ್ಯೆಗಳಾದರೂ ಮೂಸಿ ನೋಡಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಇಲಾಖೆಯನ್ನು ನಿಭಾಯಿಸುವ ಶಕ್ತಿ ಇಲ್ಲ. ಗೃಹ ಇಲಾಖೆಯನ್ನು ನಿಭಾಯಿಸಲು ಎಲ್ಲಾ ರೀತಿಯಿಂದ ಅವರು ವಿಫಲವಾಗಿದ್ದಾರೆ ಎಂದು ಆಕ್ಷೇಪಿಸಿದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು