ವಿಜಯಪುರದಲ್ಲಿ ಭೂಕಂಪನದ ಅನುಭವ: ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲು!


(Santhoshvani.com)

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ದಿನದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಸೆ. 29 ಬೆಳಗಿನ ಜಾವ 3.5 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಅಧಿಕೃತವಾಗಿ ಮಾಹಿತಿ ನೀಡಿದೆ.

​ಇಂದು ಬೆಳಗಿನ ಜಾವ 12:26 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದ್ದು, ಭೂಮಿಯ ಒಳಗೆ 10 ಕಿಲೋಮೀಟರ್ ಆಳದಲ್ಲಿ ಇದರ ಕಂಪನಗಳು ದಾಖಲಾಗಿವೆ. ಭೂಕಂಪನದ ಕೇಂದ್ರಬಿಂದುವು ದಿನದಾವರ ಗ್ರಾಮ ಪಂಚಾಯಿತಿಯ ನೈಋತ್ಯ ದಿಕ್ಕಿನಲ್ಲಿ 1.1 ಕಿಲೋಮೀಟರ್ ದೂರದಲ್ಲಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.ಈ ಕಂಪನದ ಕೇಂದ್ರಬಿಂದುವು ಇಂಗಳೇಶ್ವರ ಗ್ರಾಮ ಪಂಚಾಯಿತಿಯಿಂದ ಆಗ್ನೇಯ ದಿಕ್ಕಿನಲ್ಲಿ 3 ಕಿಲೋಮೀಟರ್ ದೂರದಲ್ಲಿದೆ.

​ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಬಿನಾಳ ಗ್ರಾಮದಿಂದ ದಕ್ಷಿಣ-ನೈಋತ್ಯ ದಿಕ್ಕಿನಲ್ಲಿ 5.3 ಕಿಲೋಮೀಟರ್ ದೂರದಲ್ಲಿದೆ.ದಿನದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಣಕೇರಿ ಗ್ರಾಮದಿಂದ ಪಶ್ಚಿಮಕ್ಕೆ 5.5 ಕಿಲೋಮೀಟರ್ ದೂರದಲ್ಲಿದೆ.ಭೌಗೋಳಿಕವಾಗಿ ಈ ಸ್ಥಳವು ಬಸವನ ಬಾಗೇವಾಡಿಯಿಂದ ಈಶಾನ್ಯ ದಿಕ್ಕಿನಲ್ಲಿ 11.5 ಕಿಲೋಮೀಟರ್ ಹಾಗೂ ವಿಜಯಪುರ ನಗರದಿಂದ ನೈಋತ್ಯ ದಿಕ್ಕಿನಲ್ಲಿ 40 ಕಿಲೋಮೀಟರ್ ದೂರದಲ್ಲಿದೆ ಎಂದು ವರದಿಯಾಗಿದೆ.








Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು