(santhoshvani.com)
ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಧಾರ್ಮಿಕ ಹಾಗೂ ಗಣ್ಯರ ಸಾನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.
ಸಮಾರಂಭದಲ್ಲಿ ಚಿಂಚಣೆ ಸಿದ್ದ ಸಂಸ್ಥಾನದ ಮಠದ ಶ್ರೀ ಮ. ನಿ. ಪ್ರ. ಸೃಷ್ಠ ಶಿವಪ್ರಸಾದ ದೇವರು, ದತ್ತವಾಡ-ಮದಿಹಳ್ಳಿ ಆಶ್ರಮದ ಶ್ರೀ ಪ್ರೋ. ಬ್ರ. ಸದ್ಗುರು ಹೃಷಿಕೇಶಾನಂದ ಬಾಬಾ ಮಹಾರಾಜರು, ಮದಿಹಳ್ಳಿಯ ಶ್ರೀ ವಾಮನದೇವರು, ಘೋಡಗೇರಿ ಶಿವಾನಂದಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಹುಕ್ಕೇರಿ ವೀಠಮಠದ ಶ್ರೀ ಮ. ನಿ. ಪ್ರ. ಶಿವಬಸವ ಮಹಾಸ್ವಾಮಿಗಳು ಹಾಗೂ ಹುಲ್ಲೋಳ್ಳಿ ಗ್ರಾಮದ ಶ್ರೀ ಪರಮಪೂಜ್ಯ ಅಭಿನವ ಮಂಜುನಾಥ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಸಂಘದ ಅಧ್ಯಕ್ಷ ಗುರುಸಿದ್ಧ ಮಾಯಪ್ಪ ಬಾಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬಿ.ಡಿ.ಸಿ.ಸಿ. ಬ್ಯಾಂಕ್ ಬೆಳಗಾವಿಯ ನಿರ್ದೇಶಕರು ಹಾಗೂ ಚಿಕ್ಕೋಡಿ ಮಾಜಿ ಸಂಸದರಾದ ರಮೇಶ ವಿ. ಕತ್ತಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಸಹಕಾರಿ ಸಂಘದ ಸೌಲಭ್ಯಗಳು ಮತ್ತು ಅತಿಥಿಗಳ ಉಪಸ್ಥಿತಿ ಸಂಘದ ಉಪಾಧ್ಯಕ್ಷ ವಂದನಾ ಸಿದ್ದಪ್ಪಾ ಬಾಗಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರಾದ ವಿಠಲ ಭೀರಸಿದ್ಧ ವಾಳಕಿ, ಕಾಡಪ್ಪಾ ಭೀಮಪ್ಪಾ ಕುರಬೇಟಿ, ಗೋಪಾಲ ಮಾಯಪ್ಪಾ ಬಾಗಿ, ತಾನಾಜಿ ಭೀಮರಾಯಿ ಹೊಸೂರಿ, ರಾಮಚಂದ್ರ ಬಾಳಪ್ಪಾ ಬಣ್ಣನವರ, ಪಾತಿಮಾ ಮಲಿಕ ಬಲಿಗಾರ, ಸಿದ್ರಾಮೇಶ್ವರ ಈರಪ್ಪಾ ಜರಲಿ, ನಾಮದೇವ ಹೂವಪ್ಪಾ ಪಾಂಡ್ರೆ, ಮಲ್ಲಿಕಾರ್ಜುನ ಕಂಪಣ್ಣಾ ಕುರಬೇಟಿ ಹಾಗೂ ನಾಗರಾಜ ಕಂಪಣ್ಣಾ ಕರಗುಪ್ಪಿ ಉಪಸ್ಥಿತರಿದ್ದರು. ಅಲ್ಲದೆ ಸಂಘದ ಸದಸ್ಯರು, ರೈತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೂತನ ಕಟ್ಟಡದ ನಿರ್ಮಾಣದಿಂದ ಮದಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಸಹಕಾರಿ ಸಂಘದ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯಲಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಾಲ ಹಾಗೂ ಇತರೆ ಸಹಕಾರಿ ಸೌಲಭ್ಯಗಳು ಪರಿಣಾಮಕಾರಿಯಾಗಿ ಲಭ್ಯವಾಗುವ ನಿರೀಕ್ಷೆ ವ್ಯಕ್ತವಾಯಿತು. ಇದೇ ವೇಳೆ ಬಿ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿಗಳು ಹಾಗೂ ಸಂಘದ ಸಿಬ್ಬಂದಿ ವರ್ಗದವರಾದ ಮಲ್ಲಪ್ಪಾ ಬಸವಣ್ಣಿ ಮಾನಗಾಂವಿ, ಮಲಿಕಜಾನ ಗೌಸಮೊದಿನ ಅವರಗೋಳ ಹಾಗೂ ಸಚಿನ ಹಾಲಪ್ಪಾ ನೆಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು