ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಸಬ್ಸಿಡಿ ಯಂತ್ರೋಪಕರಣ ವಿತರಣೆ ಮಾಡಿದ ಶಾಸಕ ನಿಖಿಲ್ ಕತ್ತಿ.!

(Santhoshvani.com)

ಹುಕ್ಕೇರಿ: ಅನ್ನದಾತರ ಕೃಷಿ ಕಾರ್ಯವನ್ನು ಸುಲಭಗೊಳಿಸುವ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಯೋಗದ ಕೃಷಿ ಯಾಂತ್ರೀಕರಣ ಯೋಜನೆಯು ರೈತರಿಗೆ ಭರ್ಜರಿ ನೆರವು ನೀಡುತ್ತಿದೆ. ಇದರಡಿ ಒಟ್ಟು ೯೦ ಲಕ್ಷ ರೂ. ಸಬ್ಸಿಡಿ ಮೊತ್ತದಲ್ಲಿ ಸುಮಾರು ೧೨೦ ಕ್ಕೂ ಅಧಿಕ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದ್ದು, ಶಾಸಕ ನಿಖಿಲ್ ಕತ್ತಿ ಅವರು ರೈತರಿಗೆ ಯಂತ್ರೋಪಕರಣಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.  

​ಕೇಂದ್ರ ಸರ್ಕಾರದ ಶೇ. ೬೦ ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ. ೪೦ ರಷ್ಟು ಅನುದಾನದ ಸಹಭಾಗಿತ್ವದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೃಷಿ ಇಲಾಖೆಯ ಮೂಲಕ ಹುಕ್ಕೇರಿ ತಾಲ್ಲೂಕಿನ ರೈತರಿಗೆ ಪವರ್ ಟಿಲ್ಲರ್ ಸೇರಿದಂತೆ ವಿವಿಧ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದ್ದು, ಇದರಿಂದ ರೈತರ ಶ್ರಮ ತಗ್ಗುವುದರ ಜತೆಗೆ ಕೃಷಿ ಉತ್ಪಾದಕತೆ ಹೆಚ್ಚಾಗಲು ಸಹಕಾರಿಯಾಗಲಿದೆ.

​ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ರೈತರಿಗೆ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ್ದು, ಈ ಉಪಕ್ರಮದಿಂದ ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆತಂತಾಗಿದೆ.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಮಹಾದೇವ ಪಟಗುಂದಿ ಸಿಬ್ಬಂದಿ ವರ್ಗ ಹಾಗೂ ರೈತರು ಇತರೆ ಉಪಸ್ಥಿತರಿದ್ದರು.









Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು