ಬೆಳಗಾವಿ ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯು ಇವತ್ತು ಜರುಗಿತ್ತು

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯು ಇವತ್ತು  ನಡೆದಿದ್ದು  ಒಂದು ಸಮಿತಿಗೆ ತಲಾ 7 ಸದಸ್ಯರಂತೆ ನಾಲ್ಕು ಸಮಿತಿಗಳಿಗೆ ಒಟ್ಟು 28 ಸದಸ್ಯರ ಆಯ್ಕೆ ಪ್ರಕ್ರಿಯೆ ಜರುಗಿತ್ತು ಆಡಳಿತ ಪಕ್ಷ 20, ವಿರೋಧ ಪಕ್ಷ 8 ಒಟ್ಟು 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ..

ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಗೆ ಬ್ರಹ್ಮಾನಂದ ಮೀರಜಕರ, ರಮೇಶ ಮೈಲುಗೋಳ, ಶಂಕರ ಪಾಟೀಲ, ರವಿರಾಜ ಸಾಂಬರೆಕರ, ದೀಪಾಲಿ ಟೋಪಗಿ, ಮೋದಿನಸಾಬ ಮತವಾಲೆ, ಬಸವರಾಜ ಮೊದಗೆಕರ ಸದಸ್ಯರಾಗಿ ಆಯ್ಕೆ ಆಗಿದ್ದು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ
ಶ್ರೀಶೈಲ್ ಕಾಂಬಳೆ, ರಾಜು ಬಾತಕಾಂಡೆ, ರೂಪಾ ಚಿಕ್ಕಲದಿನ್ನಿ, ನೇತ್ರಾವತಿ ಭಾಗವತ, ಪ್ರಿಯಾ ಸಾತಗೌಡ, ಶಾಮೋಬಿನ ಪಠಾನ ಹಾಗೂ ಶಾಹಿದ ಖಾನ ಪಠಾನ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ಇನ್ನೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಜಯಂತ ಜಾಧವ, ಶ್ರೇಯಸ ನಾಕಾಡಿ, ಸವಿತಾ ಪಾಟೀಲ, ಗಿರೀಶ ದೊಂಗಡಿ, ಅಭಿಜಿತ ಜವಳಕರ, ಲಕ್ಷ್ಮಿ ಲೋಕರಿ, ಖುರ್ಶಿದ ಮುಲ್ಲಾ ಆಯ್ಕೆ ಆಗಿದ್ದಾರೆ. ಲೆಕ್ಕಗಳ ಸ್ಥಾಯಿ ಸಮಿತಿಗಳಿಗೆ ಸಾರಿಕಾ ಪಾಟೀಲ, ರೇಷ್ಮಾ ಕಾಮಕರ, ಮಾಧವಿ ರಾಘೋಚೆ, ಜಯತೀರ್ಥ ಸವದತ್ತಿ, ನೀತಿನ ಜಾಧವ, ಶಿವಾಜಿ ಮಂಡೋಲಕರ, ಅಪ್ರೂಜ ಮುಲ್ಲಾ ಆಯ್ಕೆ ಆಗಿದ್ದಾರೆ.



ಮುಂಜಾನೆ 10 ರಿಂದ ಮದ್ಯಾಹ್ನ 12ರ ವರೆಗೆ ನಾಮಪತ್ರ ಪಡೆದು, ತುಂಬಿಕೊಡುವ ಕಾಲಾವಾಕಾಶ ಇದ್ದಿದ್ದು, ಮಧ್ಯಾಹ್ನ 3 ಗಂಟೆಗೆ ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತೆ ಕೆ ಎಂ ಜಾನಕಿ ಅವರ ನೇತೃತ್ವದಲ್ಲಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಒಟ್ಟು 64 ಮತದಾನ ಸದಸ್ಯರಿರುವ ಪಾಲಿಕೆಯಲ್ಲಿ 47 ಸದಸ್ಯರು ಚುನಾವಣೆಯಲ್ಲಿ ಭಾಗಿಯಾಗಿದ್ದರು.

ಈ 28 ಜನ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ನಂತರ ಮುಂದೆ ಅಧ್ಯಕ್ಷರ ಪಟ್ಟಕ್ಕಾಗಿ ತೀವ್ರ ಲಾಭಿ ಶುರುವಾಗಲಿದ್ದು, ಅದರಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಉತ್ತರದಿಂದ, ಶ್ರೇಯಸ್ ನಾಕಾಡಿ, ರೂಪಾ ಚಿಕ್ಕಲದಿನ್ನಿ ಆಕಾಂಕ್ಷಿಗಳಾದರೆ, ದಕ್ಷಿಣದಿಂದ ದೀಪಾಲಿ ಟೋಪಗಿ, ರಮೇಶ ಮೈಲಾಗೋಳ, ಸಾರಿಕಾ ಪಾಟೀಲ, ರಾಜು ಬಾತಕಾಂಡೆ ಇನ್ನಿತರ ಆಕಾಂಕ್ಷಿಗಳಿರುವರು ಬೆಳಗಾಯಿ ಮಹಾನಗರ ಪಾಲಿಕೆಗೆ 28 ಸದಸ್ಯರ ಆಯ್ಕೆ ಪ್ರಕ್ರಿಯೆ ಇವತೂ ಪೂರ್ಣಗೊಂಡಿದೆ.
















Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 






0 ಕಾಮೆಂಟ್‌ಗಳು