ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ


ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕು ವ್ಯಾಪ್ತಿಗೆ ಬರುವ ಇಲ್ಲಿನ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ರೇಣುಕಾ ಗಣಾಚಾರಿ ಅವರು ಒಂದೇ ಹೆರಿಗೆ ವೇಳೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ಸಹಕಾರದಿಂದ ಯಶಸ್ವಿ ಪ್ರಯತ್ನದಿಂದ ಹೆರಿಗೆ ಯಶಸ್ವಿಯಾಗಿ ನೆರವೇರಿದ್ದು, ತಾಯಿ ಹಾಗೂ ಮೂವರು ನವಜಾತ ಶಿಶುಗಳು ಉತ್ತಮವಾಗಿ ಆರೋಗ್ಯವಾಗಿದ್ದಾರೆ.


ಡಾಕ್ಟರ್ ಶ್ವೇತಾ ನಾಯಿಕ ನೇತೃತ್ವದಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೆರಿಗೆಯ ಬಳಿಕ ತಾಯಿ ಮತ್ತು ಮೂವರು ಶಿಶುಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಿ ಆರೈಕೆ ನೀಡಲಾಗುತ್ತಿದೆ.


ಕುಟುಂಬಸ್ಥರಲ್ಲಿ ಮನೆಮಾಡಿದ ಸಂತಸ ಗಣಾಚಾರಿ ಕುಟುಂಬದಲ್ಲಿ ತ್ರಿವಳಿ ಮಕ್ಕಳ ಜನನವಾಗಿರುವ ಈ ವಿಷಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ರೇಣುಕಾ ಗಣಾಚಾರಿ ಹಾಗೂ ಅವರ ಕುಟುಂಬಸ್ಥರು ಮಕ್ಕಳ ಆಗಮನದಿಂದ ಸಂತಸಗೊಂಡಿದ್ದಾರೆ. ಸದ್ಯ ಮೂವರು ಶಿಶುಗಳು ಆರೋಗ್ಯವಾಗಿರುವುದರಿಂದ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. 

ಇದು ವೈದ್ಯಲೋಕದಲ್ಲಿ ವಿಸ್ಮಯ.ಆರೋಗ್ಯವಂತ ತ್ರಿವಳಿ ಮಕ್ಕಳಿಗೆ ತಾಯಿ ಜನ್ಮ ನೀಡಿರುವುದು.












santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 

0 ಕಾಮೆಂಟ್‌ಗಳು