ಮನುಕುಲಕ್ಕೆ ಪ್ರೀತಿ-ಶಾಂತಿಯ ಪಾಠ ಕಲಿಸಿದ ಮದರ್ ತೆರೇಸಾ ಜನ್ಮದಿನಾಚರಣೆ - ಸಂತೋಷವಾಣಿ ವಿಶೇಷ! ​World Remembers Mother Teresa

 "Image Source: Wikimedia Commons"


(Santhoshvani.com)

ಸಂತೋಷವಾಣಿ ವಿಶೇಷ:

ಅಪಾರ ಕರುಣೆ, ನಿಸ್ವಾರ್ಥ ಸೇವೆ ಹಾಗೂ ಮಾನವೀಯತೆಯ ಪ್ರತೀಕವಾಗಿ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಅವರ ಜನ್ಮದಿನವನ್ನು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಮರಿಸಿಕೊಳ್ಳಲಾಗುತ್ತಿದೆ. ಬಡವರು, ಅನಾಥರು, ನಿರ್ಗತಿಕರು ಮತ್ತು ಅಂತಿಮ ದಿನಗಳನ್ನು ಎಣಿಸುತ್ತಿರುವ ರೋಗಿಗಳ ಸೇವೆಯೇ ತಮ್ಮ ಜೀವನದ ಉಸಿರು ಎಂದುಕೊಂಡಿದ್ದ ಮರ್ಶೆ ಮದರ್ ತೆರೇಸಾ ಅವರ ಬದುಕು ಇಡೀ ಮಾನವಕುಲಕ್ಕೆ ಸದಾ ಸ್ಫೂರ್ತಿದಾಯಕವಾಗಿದೆ.

​ಆಗಸ್ಟ್ 26, 1910 ರಂದು ಜನಿಸಿದ ಮೇರಿ ಅಗನೆಸ್ ಬೊಜಾಕ್ಸಿಯು (ಮದರ್ ತೆರೇಸಾ) ಭಾರತದ ಕೋಲ್ಕತ್ತಾವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. 'ಮಿಷನರೀಸ್ ಆಫ್ ಚಾರಿಟಿ' ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ತಿರಸ್ಕರಿಸಲ್ಪಟ್ಟವರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಜಾತಿ, ಮತ, ಧರ್ಮದ ಹಂಗಿಲ್ಲದೆ ನೊಂದವರ ಬಾಳಿಗೆ ಬೆಳಕಾದ ಇವರ ಸೇವಾ ಮನೋಭಾವಕ್ಕೆ 1979ರಲ್ಲಿ ವಿಶ್ವದ ಅತ್ಯುನ್ನತ 'ನೊಬೆಲ್ ಶಾಂತಿ ಪ್ರಶಸ್ತಿ' ಒಲಿದುಬಂದಿತು.
​ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ನಮ್ಮ ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್‌ವರ್ಕ್ ವತಿಯಿಂದ, ವಿಶ್ವಕ್ಕೆ ಪ್ರೀತಿ ಮತ್ತು ಕರುಣೆಯ ಪಾಠ ಕಲಿಸಿದ ಮಹಾನ್ ಚೇತನ ಮದರ್ ತೆರೇಸಾ ಅವರಿಗೆ ನಮನಗಳು.









Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು