ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಸಂಭ್ರಮ - ಸಮಸ್ತ ನಾಡಿನ ಜನತೆಗೆ ಈದ್ ಮಿಲಾದ್ ಶುಭಾಶಯಗಳು!Holy Prophet Mohammed Birthday Special

(Santhoshvani.com)


ಸಂತೋಷವಾಣಿ ವಿಶೇಷ:

ಇಸ್ಲಾಂ ಧರ್ಮದ ಅಂತಿಮ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ (ಸಲ್) ಅವರ ಜನ್ಮದಿನದ ಸ್ಮರಣೆಯು ಪವಿತ್ರವಾದ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಇಂದು ಅತ್ಯಂತ ಸಡಗರ, ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್‌ವರ್ಕ್ ವತಿಯಿಂದ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಕೋರಲಾಗಿದೆ.

​ಶಾಂತಿ, ಕರುಣೆ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಪ್ರವಾದಿ ಮಹಮ್ಮದ್ ಅವರ ಬೋಧನೆಗಳು ಇಂದಿಗೂ ಸಮಾಜಕ್ಕೆ ದಾರಿ ದೀಪವಾಗಿವೆ. ಪ್ರವಾದಿಯವರ ಜೀವನ ಮೌಲ್ಯಗಳು ಎಲ್ಲರ ಬದುಕಿನಲ್ಲಿ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯನ್ನು ಮೂಡಿಸಲಿ ಎಂದು ಆಶಿಸಲಾಗಿದೆ.

​ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ:

ಈ ಪವಿತ್ರ ಹಬ್ಬದ ದಿನದಂದು ನಮ್ಮ ನಾಡಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಎಲ್ಲರ ನಡುವೆ ಸೌಹಾರ್ದತೆ ಹಾಗೂ ಸಹಬಾಳ್ವೆ ಸದಾ ಕಾಲ ನೆಲೆಸಲಿ ಎಂದು ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್‌ವರ್ಕ್ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.








Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು