ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ : ಉಪಮೇಯರ ಹಣಮಂತ ಕೊಂಗಾಲಿ

ಬೆಳಗಾವಿ : ಮಕ್ಕಳು ಕಲಿಕೆಯೊಂದಿಗೆ ವಿವಿಧ ಕಲಾ ಪ್ರಕಾರಗಳನ್ನು ರೂಢಿಸಿಕ ದೊಂಡಿರುತ್ತಾರೆ. ಅಂತಹ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಮಹಾನಗರ ಪಾಲಿಕೆ ಉಪ ಮಹಾಪೌರ ಹಣಮಂತ ಕೋಂಗಾಲಿ ಹೇಳಿದರು.


ರಾಮತೀರ್ಥ ನಗರದಲ್ಲಿ ಮಾಯಾ ಕಂಪ್ಯೂಟರ್ಸ್ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತವಾಗಿ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಚಿತ್ರಕಲೆ, ರಂಗೋಲಿ, ಪ್ರಬಂಧ, ಭಾಷಣ, ಹಾಗೂ ಗಾಯನ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳನ್ನೂ ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. 

ಕಾರ್ಯಕ್ರಮ ಆಯೋಜಿಸಿ ಅಧ್ಯಕ್ಷತೆ ವಹಿಸಿದ್ದ ಮಾಯಾ ಕಂಪ್ಯೂಟರ್ಸ್ ಸಂಸ್ಥಾಪಕ, ಉಮೇಶ ಹಾರುಗೊಪ್ಪ, ಅತಿಥಿಗಳಾಗಿದ್ದ ಲಯನ್ಸ್ ಕ್ಲಬ್‌ ಅಧ್ಯಕ್ಷ ದಿನೇಶ ಭಿರಡೆ, ಪದಾಧಿಕಾರಿಗಳಾದ ಎಂ. ಬಿ. ಪಾಟೀಲ,ಡಾ. ಜಗದೀಶ ಕಾಡಮ್ಮನವರ, ಡಾ. ಮಹೇಶ್ ಮಗದುಮ್, ಬಸವರಾಜ ಹಮ್ಮಣ್ಣವರ, ಪ್ರೊ. ಶಶಿಕಲಾ ಪಾವಸೆ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಬಸವರಾಜ ಕುಪ್ಪಸ ಗೌಡ್ರ, ಶಿಕ್ಷಕಿ ರೇಖಾ ನಾಯ್ಕ, ಮಾತನಾಡಿದರು.
ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಸಂಜೀವ ತಿಲಗರ ಸ್ವಾಗತಿಸಿದರು. ಮಹೇಶ್ವರಿ ಹಾರುಗೊಪ್ಪ ವಂದಿಸಿದರು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಾಲಕರು ಸಿಬ್ಬಂದಿ ಉಪಸ್ಥಿತರಿದ್ದರು.






ಜಿಲ್ಲಾ -





Santoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್


0 ಕಾಮೆಂಟ್‌ಗಳು