ಹುಕ್ಕೇರಿ: ತಾಲೂಕಿ ಹೊನ್ನಿಹಳ್ಳಿ ಗ್ರಾಮದಲ್ಲಿ ಶ್ರೀ ಮಹಾದೇವ ಸಾತಪ್ಪಾ ಮಾದಿಗ ಅವರು ಅಂಚೆ ಇಲಾಖೆಯಲ್ಲಿ 40 ವರ್ಷಗಳ ಕಾಲ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಹಾಗೂ ಸತ್ಯ-ನ್ಯಾಯ-ನೀತಿಯಿಂದ ಸೇವೆ ಸಲ್ಲಿಸಿ ಸುತ್ತಮುತ್ತಲಿನ ಹಳ್ಳಿಗಳ ಜನರ ಮನ ಗೆದ್ದಿದ್ದ ನಿವೃತ್ತ ಪೋಸ್ಟ್‌ಮ್ಯಾನ್ ಅವರು ತಮ್ಮ 71ನೇ ವರ್ಷದ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಐದು ವರ್ಷಗಳ ಹಿಂದೆ ನಿವೃತ್ತರಾದ ಇವರು, ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸುತ್ತಮುತ್ತಲಿನ 15 ಹಳ್ಳಿಗಳಲ್ಲಿ ಮನೆಮಾತಾಗಿದ್ದರು. ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಇಲಾಖೆಯಲ್ಲಿ ಹಲವು ಬಡ್ತಿಗಳು (ಪ್ರಮೋಷನ್) ಬಂದಿದ್ದರೂ, ತಾನು ಹುಟ್ಟಿದ ಊರು, ಹೆತ್ತ ತಂದೆ-ತಾಯಿ ಹಾಗೂ ತಾಯಿ ಸಮಾನ ಕೃಷಿ ಕಾಯಕವೇ ತನ್ನ ಜೀವ ಎಂದು ನಂಬಿ, ಬಂದ ಬಡ್ತಿಗಳನ್ನೆಲ್ಲ ನಿರಾಕರಿಸಿ ಸ್ವಗ್ರಾಮದಲ್ಲೇ ಸೇವೆ ಮುಂದುವರಿಸಿದ ಅಪರೂಪದ ಸರಳ ಜೀವ ಇವರಾಗಿದ್ದಾರೆ.
ಕೃಷಿಯೇ ಜೀವ - ತುಂಬಿದ ಕುಟುಂಬದೊಂದಿಗೆ ಬದುಕು:
ಬಿಡುವಿನ ವೇಳೆಯಲ್ಲಿ ವ್ಯವಸಾಯ ಮಾಡುತ್ತಿದ್ದ ಇವರು, ಪ್ರಸ್ತುತ ನಿವೃತ್ತಿಯ ನಂತರವೂ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ತಮ್ಮ ತುಂಬಿದ ಕುಟುಂಬದ ಸದಸ್ಯರೊಂದಿಗೆ ತೋಟದಲ್ಲಿ ಸಸಿಗಳನ್ನು ನೆಟ್ಟು ಪ್ರಕೃತಿ ಪ್ರೇಮ ಮೆರೆದಿದ್ದಾರೆ.
ಮಗುವಿನಂತಹ ಮನಸ್ಸು, ಗುಪ್ತ ದಾನಿ:-
ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು" ಎಂಬ ತತ್ವದಂತೆ ಬದುಕುತ್ತಿರುವ ಇವರು, ನೌಕರಿಯಲ್ಲಿದ್ದಾಗ ಕಷ್ಟದಲ್ಲಿದ್ದ ನೂರಾರು ಜನರಿಗೆ ಯಾರಿಗೂ ತಿಳಿಯದಂತೆ ಸಹಾಯ ಹಸ್ತ ಚಾಚಿದ್ದಾರೆ. ಹಿರಿಯ ಜೀವಗಳಿಗೆ ನೆರವಾಗುತ್ತಾ, ಮಗುವಿನಂತಹ ನಿಷ್ಕಲ್ಮಶ ಮನಸ್ಸಿನಿಂದ ಬದುಕುತ್ತಿರುವ ಇವರ ಸರಳತೆಗೆ ಇಡೀ ಭಾಗದ ಜನರೇ ಸಾಕ್ಷಿಯಾಗಿದ್ದಾರೆ.
ನಿವೃತ್ತಿಯ ನಂತರವೂ ಕೃಷಿ ಕಾಯಕದಲ್ಲಿ ಸಕ್ರಿಯರಾಗಿರುವ ಈ ಹಿರಿಯ ಚೇತನಕ್ಕೆ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಆಪ್ತ ಬಾಂಧವರು ಸುತ್ತಮುತ್ತಲಿನ 15 ಹಳ್ಳಿಗಳ ಗ್ರಾಮಸ್ಥರು ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿ, ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.
ತಾಲೂಕು -
ಸಂತೋಷ ವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್
Santoshvani Digital Daily News portal


0 ಕಾಮೆಂಟ್‌ಗಳು