ಪ್ರತಿಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನಕ್ಕೆ ಚಾಲನೆ

ಬೆಂಗಳೂರು:ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಇಡೀ ದೇಶದಲ್ಲಿ ದೇಶಭಕ್ತಿಯ ಅಲೆ ಮೂಡುವುದು ಸಹಜ. ನಮ್ಮ ಮನೆಯಂಗಳದಲ್ಲಿ ತ್ರಿವರ್ಣ ಧ್ವಜ ಹಾರಿದಾಗ ಸಿಗುವ ಹೆಮ್ಮೆ ಹಾಗೂ ಸಂಭ್ರಮ ಅಷ್ಟಿಷ್ಟಲ್ಲ. ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಇದೇ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ವರ್ಷವೂ 'ಪ್ರತಿ ಮನೆಯಲ್ಲೂ ತ್ರಿವರ್ಣ ಬಡಿದೆಬ್ಬಿಸಲು ಪ್ರತಿವರ್ಷದಂತೆ ಧ್ವಜ' ಅಭಿಯಾನಕ್ಕೆ ಇಂದಿನಿಂದ ಚಾಲನೆ ದೊರೆತಿದೆ.


ಒಂದು ದೇಶದ ಅಸ್ಮಿತೆ ಮತ್ತು ಒಗ್ಗಟ್ಟಿನ ಅತಿದೊಡ್ಡ ಸಂಕೇತ ಎಂದರೆ ಆ ದೇಶದ ರಾಷ್ಟ್ರಧ್ವಜ. ಪ್ರತಿಯೊಬ್ಬ ನಾಗರಿಕನೂ ತನ್ನ ದೇಶದ ಧ್ವಜವನ್ನು ಹೆಮ್ಮೆಯಿಂದ ಹಿಡಿದಾಗ, ಅಲ್ಲಿ ಇಡೀ ರಾಷ್ಟ್ರವೇ ಒಗ್ಗೂಡುತ್ತದೆ. ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಧೋತಕವಾಗಿ 2022 ರಲ್ಲಿ ಆರಂಭವಾದ ಹರ್ ಘರ್ ತಿರಂಗಾ ಅಂದರೆ 'ಪ್ರತಿ ಮನೆಯಲ್ಲಿಯೂ ಧ್ವಜಾರೋಹಣ' ಅಭಿಯಾನ
ಪ್ರತಿಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನಕ್ಕೆ ಚಾಲನೆ!


ಇಂದು ದೇಶದ ಅತಿದೊಡ್ಡ ಸಾರ್ವಜನಿಕ ಭಾಗವಹಿಸುವಿಕೆಯ ಕಾರ್ಯಕ್ರಮವಾಗಿ ರೂಪುಗೊಂಡಿದೆ.
ಪ್ರತಿ ಹೃದಯ ಸಮರ್ಪಣೆ! ಪ್ರತಿ ಮನೆ ಜಾತಿ, ಧರ್ಮ ಮತ್ತು ಪ್ರದೇಶಗಳ ಕೃಷಿ ಗಡಿಯನ್ನು ಮೀರಿ ಸಮುದಾಯಗಳಾದ್ಯಂತ
ಈ ವರ್ಷದ ಅಭಿಯಾನವು ಇಂದಿನಿಂದ ಆರಂಭಗೊಂಡು ಆ.17 ರವರೆಗೆ ದೇಶಾದ್ಯಂತ ಅತ್ಯಂತ ಸಡಗರದಿಂದ ನಡೆಯಲಿದೆ. ನಾಗರಿಕರು ಭಾರತದ ಏಕತೆ, ಗೌರವ ಮತ್ತು ಸಾಮೂಹಿಕ ರಾಷ್ಟ್ರೀಯ ಗುರುತಿನ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲು ಈ ಅಭಿಮಾನದ ಅಭಿಯಾನ ಪ್ರೇರೇಪಿಸುತ್ತಿದೆ.


ಅದು ನಮ್ಮ ತ್ರಿವರ್ಣ ಧ್ವಜವು ಕೇವಲ ಮೂರು ಬಣ್ಣಗಳ ಬಟ್ಟೆಯಲ್ಲ. ಲಕ್ಷಾಂತರ ಸ್ವಾತಂತ್ರ್ಯ ಯೋಧರ ತ್ಯಾಗ । ಮತ್ತು ಬಲಿದಾನಗಳ ಜೀವಂತ ಸಂಕೇತ. ಧ್ವಜದಲ್ಲಿರುವ ಕೇಸರಿ ಬಣ್ಣವು ದೇಶದ ಶಕ್ತಿ ಮತ್ತು ಧೈರ್ಯವನ್ನು ಪ್ರತಿನಿಧಿಸಿದರೆ. ಬಿಳಿ ಬಣ್ಣವು ಶಾಂತಿ ಮತ್ತು ಸತ್ಯದ ಮಾರ್ಗವನ್ನು ತೋರುತ್ತದೆ. ಇನ್ನು ಹಸಿರು ಬಣ್ಣವು ನಾಡಿನ ಸಮೃದ್ಧಿ ಹಾಗೂ ಕೃಷಿಯನ್ನು ಬಿಂಬಿಸುತ್ತದೆ.













Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 

0 ಕಾಮೆಂಟ್‌ಗಳು