ಸರ್ಕಾರದ ಮುಜುಗರ ತಪ್ಪಿಸಲು ನಾಗೇಂದ್ರ ಅವರಿಂದ ಬಲವಂತದ ರಾಜೀನಾಮೆ ಎಚ್.ಡಿ. ಕುಮಾರಸ್ವಾಮಿ

(Santhoshvani.com)

ಬೆಂಗಳೂರು:ಪಕ್ಷಕ್ಕ ಆಗಬಾರದು ఎంబ ಕಾರಣಕ್ಕೆ ಸ್ವ-ಇಚ್ಛೆಯಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿ ರುವುದಾಗಿ ಬಿ.ನಾಗೇಂದ್ರ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಯಾವ ಕಾರಣಕ್ಕೆ ಮುಜುಗರ ಆಗುತ್ತಿದೆ. ಹಗರಣದ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟಿದ್ದಾ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ನಾಗೇಂದ್ರ ರಾಜೀನಾಮೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕೇಂದ್ರ ಸಚಿವರು, ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕುಮಾರಸ್ವಾಮಿಯವರ ಮೇಲೆಯೂ

ಆರೋಪ ಇಲ್ವಾ ಎಂದು ನಾಗೇಂದ್ರ ಹೇಳಿದ್ದಾರೆ. ನನ್ನ ಮೇಲೆ ಇರೋದು ರಾಜಕೀಯ ಆರೋಪ. ನಾನು ದುಡ್ಡು ಹೊಡೆದಿದ್ದೇನೆ ಎಂದು ಎಲ್ಲೂ ಹೇಳಿಲ್ಲ. ಕುಮಾರಸ್ವಾಮಿ ಬಾಯಿ ಮುಚ್ಚಿಸಲೆಂದು 14 ವರ್ಷಗಳ ಹಿಂದಿನ ಆರೋಪವನ್ನು ಮುಂದುವರಿಸಿಕೊಂಡು ಹೋಗುವ

ಮೂಲಕ ಜೀವಂತವಾಗಿ ಇಟ್ಟುಕೊಂಡ ಬರುತ್ತಿದ್ದಾರೆ. ಕುಮಾರಸ್ವಾಮಿಯ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ತಪ್ಪು ಮಾಡಿದ್ದರೆ ಮುಖ್ಯಮಂತ್ರಿ ಆಗಿದ್ದಾಗ ಮುಚ್ಚಿಹಾಕಬಹುದಿತ್ತು. ಯಾವುದನ್ನು ಮುಚ್ಚಿ ಹಾಕಿಲ್ಲ. ಹಾಗೆಯೇ ಬಿಟ್ಟಿದ್ದಿನಿ, ತನಿಖೆ ನಡೆಸಲಿ. ಕಾಂಗ್ರೆಸ್ ಹಣ ಹೊಡೆದು ಹಣ ಹಂಚಿದ್ದು, ಅದಕ್ಕೆ ಮುಜುಗರವನ್ನು ತಪ್ಪಿಸಲು ರಾಜೀನಾಮೆ ಕೊಡಿಸಿದ್ದಾರೆ ಎಂದರು.

ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ 2022ರಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿ ಸಲಾಗಿತ್ತು. 2024ರೊಳಗೆ ಉದ್ಯೋಗಗಳನ್ನು...

ನೀಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ, ಅಕ್ರಮ ನಡೆದಿದ್ದರಿಂದ ಉದ್ಯೋಗಗಳಿಗೆ ನೇಮಕಾತಿ ಪತ್ರ ನೀಡದಂತೆ ಕೆಪಿಎಸ್‌ಸಿ ವರದಿ ನೀಡಿದ ನಂತರವೂ, ಇಲಾಖೆಯ ಮಂತ್ರಿಯಾಗಿ ಉದ್ಯೋಗಗಳಿಗೆ ಹೇಗೆ ನೇಮಕಾತಿ ಪತ್ರ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಓಎಂಆ‌ರ್ ಶೀಟ್‌ ತಿದ್ದಿರುವ ಆರೋಪಗಳಿದ್ದಾಗ ಹಾಗೂ ಭ್ರಷ್ಟಾಚಾರ ನಡೆದಿದೆ ಅಂತ ಗೊತ್ತಿದ್ದರೂ, ಅಕ್ರಮದ ಬಗ್ಗೆ ಕೆಪಿಎಸ್‌ಸಿ ವರದಿ ಕೊಟ್ಟ ಬಳಿಕವೂ ನೇಮಕಾತಿ ಪತ್ರ ನೀಡಿದಿರಿ. ಇದಕ್ಕೆ ಉತ್ತರ ನೀಡುವಂತೆ ಕುಮಾರಸ್ವಾಮಿ ಆಗ್ರಹಿಸಿದರು.






Santhoshovani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 



0 ಕಾಮೆಂಟ್‌ಗಳು