ಕೇಂದ್ರದ ನೆರವಿನ ನಿರೀಕ್ಷೆಯಲ್ಲಿ ಕರ್ನಾಟಕ: ಬರಪೀಡಿತ ಪ್ರದೇಶಗಳ ವರದಿ ಶೀಘ್ರ ಸಲ್ಲಿಕೆ ಡಾ! ಜಿ ಪರಮೇಶ್ವರ್


(Santhoshvani.com)

ಬೆಂಗಳೂರು:ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ಅದನ್ನು ಆಧರಿಸಿ ಕೇಂದ್ರ ಸರ್ಕಾರವು ಪರಿಹಾರ ಬಿಡುಗಡೆ ಮಾಡಲಿದೆ' ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಇಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು 'ರಾಜ್ಯದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ. 15 ದಿನದ ನಂತರ ಮತ್ತೆ ಪರಿಶೀಲನೆ ಮಾಡಿ ಘೋಷಣೆ ಮಾಡುತ್ತೇವೆ. ಸದ್ಯ ಬೆಳೆನಷ್ಟದ ಅಂದಾಜು ಮಾಡುತ್ತಿದ್ದು, ಅದನ್ನು ಆಧರಿಸಿ ಪರಿಹಾರಕ್ಕೆ ಬೇಡಿಕೆ ಇಡುತ್ತೇವೆ' ಎಂದರು.

ರಾಜ್ಯದಲ್ಲಿ 2023ರಲ್ಲಿ ಬರದಿಂದ 39 ಸಾವಿರ ಕೋಟಿ ನಷ್ಟವಾಗಿದ್ದು, 18 ಸಾವಿರ ಕೋಟಿ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ನಾವು ದೆಹಲಿಯಲ್ಲಿ ಹೋಗಿ ಪ್ರತಿಭಟನೆ ನಡೆಸಿ, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಕೇಂದ್ರವು 3,500 ಕೋಟಿ ಬಿಡುಗಡೆ ಮಾಡಿತು. ಈ ಬಾರಿ ಹಾಗಾಗಬಾರದು. ಮಾನದಂಡ ದಂತೆಯೇ ಪರಿಹಾರಕ್ಕೆ ಬೇಡಿಕೆ ಇಡುತ್ತೇವೆ. ಅದನ್ನು ಪರಿಶೀಲಿಸಿ, ನಮಗೆ ಪರಿಹಾರ ಹಣವನ್ನು ಕೊಡಲಿ' ಎಂದರು.

ಎಸ್‌ಡಿಆರ್‌ಎಫ್‌ ಅಡಿ ರಾಜ್ಯಕ್ಕೆ 1200 ಕೋಟಿ ಪರಿಹಾರ ಬರಬೇಕಿದ್ದು, ಅದನ್ನು ನೀಡಿದಲ್ಲಿ ರೈತರಿಗೆ ವಾರದೊಳಗೆ ಪರಿಹಾರ ನೀಡುತ್ತೇವೆ' ಎಂದರು.

ಸಚಿವ ನಾಗೇಂದ್ರ ಯಾವುದೇ ಅಪರಾಧ ಮಾಡಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ. ಸಿಬಿಐ, ಇಡಿ ಚಾಜರ್‌ಶೀಟ್‌ನಲ್ಲಿ ಅವರ ಹೆಸರು ಇರಲಿಲ್ಲ. ನಾನು ಗೃಹ ಸಚಿವನಾಗಿದ್ದ ಕಾರಣ ಆ ಬಗ್ಗೆ ನನಗೆ ಮಾಹಿತಿ ಇದೆ' ಎಂದರು.

ಸಿದ್ದರಾಮಯ್ಯ ಮೌನವಾಗಿಲ್ಲ. ಒಂದೆರಡು ತಿಂಗಳು ವಿಶ್ರಾಂತಿ ತೆಗೆದುಕೊಂಡು ಮತ್ತೆ ಚಟುವಟಿಕೆ ಶುರು ಮಾಡುತ್ತಾರೆ' ಎಂದರು.






santhoshovani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು