ಯರಗಟ್ಟಿ/ಸತ್ತಿಗೇರಿ: ಸಮೀಪದ ಸೊಪ್ಪಡ್ಲ
ಹೊರವಲಯದ ಜಮೀನುಗಳಿಗೆ ವಿಧಾನ ಪರಿಷತ್ ಸದಸ್ಯ ಎನ್.
ರವಿಕುಮಾರ್ ನೇತೃತ್ವದ ಬಿಜೆಪಿ ತಂಡ ಭಾನುವಾರ ಭೇಟಿ ನೀಡಿ, ಬರ ಪರಿಸ್ಥಿತಿ ಕುರಿತು ಅಧ್ಯಯನ ಮಾಡಿತು.
ಸಂಪೂರ್ಣ ಒಣಗಿ ಹೋಗಿರುವ ಹೆಸರು ಬೆಳೆ ವೀಕ್ಷಿಸಿ, ರೈತರ ಸಮಸ್ಯೆಗಳನ್ನು ಆಲಿಸಿತು.
'ಈ ಸಲ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೆಸರು, ಗೋವಿನಜೋಳದ ಬೆಳೆಗಾಗಿ ಪ್ರತಿ ಎಕರೆಗೆ 25 ಸಾವಿರ
ಖರ್ಚು ಮಾಡಿದ್ದೇವೆ.
ಹಾಕಿದ ಬಂಡವಾಳವೂ ಕೈಗೆಟುಕಿಲ್ಲ. ನಮಗೆ ನ್ಯಾಯ ಕೊಡಿಸಿ' ಎಂದು ರೈತರಾದ ಶೇಖಪ್ಪ ಹಳ್ಳಿ ಮತ್ತು ಮಹಾಂತೇಶ ತೋಟಗಿ ಮನವಿ ಮಾಡಿದರು.
'ಬರ ಪರಿಸ್ಥಿತಿಯಿಂದ ರೈತರಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಘೋಷಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ, ಅರ್ಹ ರೈತರಿಗೆ ಪರಿಹಾರ ಒದಗಿಸಬೇಕು' ಎಂದು ರವಿಕುಮಾರ್ ಆಗ್ರಹಿಸಿದರು.
ಶಾಸಕ ದುರ್ಯೋಧನ ಐಹೊಳೆ, 'ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದಿದ್ದರೆ, ಅಧಿವೇಶನ ನಡೆಯಲು ಬಿಡುವುದಿಲ್ಲ. ಸದನದ ಒಳಗೆ ಮತ್ತು ಹೊರಗೆ ಎರಡೂ ಕಡೆ ಹೋರಾಟ ಕೈಗೊಳ್ಳುತ್ತೇವೆ' ಎಂದು ಎಚ್ಚರಿಕೆ ಕೊಟ್ಟರು.
ಶಾಸಕರಾದ ವಿಠಲ ಹಲಗೇಕರ, ದುರ್ಯೋಧನ ಐಹೊಳೆ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಸವರಾಜ ಯಕ್ಕಂಚಿ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಈರಣ್ಣ ಚಂದರಗಿ, ರೈತ ಮೋರ್ಚಾ ಅಧ್ಯಕ್ಷ ಮಹಾಂತೇಶ ತೋಟಗಿ, ವೆಂಕಟೇಶ ದೇವರಡ್ಡಿ, ಮಹಾದೇವ ಮುರಗೋಡ, ಮಹಾಂತೇಶ ಕಾಶನ್ನವರ, ಶೇಖಪ್ಪ ಹರಳಲಿ, ಕುಮಾರ ಮಲಮಾನಿ, ಗಿರೀಶ ಪಾಟೀಲ ಉಪಸ್ಥಿತರಿದ್ದರು.
Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್


0 ಕಾಮೆಂಟ್‌ಗಳು