ಹರಿಹರ:ಕೆಪಿಎಸ್ಸಿಯಲ್ಲಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದತನಿಕೆಯನ್ನು ಸರ್ಕಾರ ತಕ್ಷಣವೇ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ. ಇಲ್ಲಿನ ಎಬಿವಿಪಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ. ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಹಾಗೂ ಸರ್ಕಾರದಅಧೀನ ಕಾರ್ಯದರ್ಶಿಗಳಿಗೆ ಮನವಿ ಪತ್ರಸಲ್ಲಿಸಿದರು.
ಪ್ರತಿಭಟನೆಯ ನೇತೃವ ವಹಿಸಿದ್ದ ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ವಿಜಯ್‌ಮಾತನಾಡಿ, ಕೆಪಿಎಸ್‌ಸಿ ಸದಸ್ಯರ ನೇಮಕಾತಿಯು ಯ್ಯಾವುದೇರಾಜಕೀಯ ಪ್ರಭಾವವಿಲ್ಲದೆ, ಅರ್ಹ ಹಾಗೂ ರಾಜಕೀಯೇತರ ವ್ಯಕ್ತಿಗಳಿಂದ ಕೂಡಿರಬೇಕು.ಕಳೆದ ಐದು ವರ್ಷಗಳಲ್ಲಿ ಕೆಪಿಎಸ್‌ಸಿ ಮೂಲಕ ನಡೆದಿರುವಎಲ್ಲಾ ನೇಮಕಾತಿ ಪ್ರಕ್ರಿಯೇಗಳ ಮೇಲೂ ಸಮಗ್ರತನಿಕೆ ನಡೆಸಬೇಕು.
ಆಯೋಗದಅಧ್ಯಕ್ಷರೊಂದಿಗೆಎಲ್ಲಾ ಸದಸ್ಯರ ಪಾತ್ರದಕುರಿತು ಪಾರದರ್ಶಕತನಿಕೆಯಾಗಬೇಕು.ಭವಿಷ್ಯದಲ್ಲಿಇಂತಹ ಅಕ್ರಮಗಳು ನಡೆ-ಯದಂತೆ ಕೆಪಿಎಸ್‌ಸಿ ವಿಧಾನದಲ್ಲಿ ಸಮಗ್ರ ಸುಧಾರಣೆತರಬೇಕೆಂದುವಿ ಜಯ್‌ಆಗ್ರಹಿಸಿದರು.
ಹರಿಹರತಾಲೂಕು ಎಬಿವಿಪಿ ಕಾರ್ಯಕರ್ತ ಸಿದ್ದಾರ್ಥ ಮಾತನಾಡಿ, ಕೆಪಿಎಸ್‌ಸಿ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಎಬಿವಿಪಿ ಸರ್ಕಾರಕ್ಕೆ ಅಗಷ್ಟ 4 ರವರೆಗೆಗಡವು ನೀಡಿತ್ತು. ಅದನ್ನು ಸರ್ಕಾರ ಪಾಲಿಸದಿರುವಕಾರಣ ಇಂದು ಪ್ರತಿಭಟಿಸುತ್ತಿದ್ದೆವೆ. ಜುಲೈ 17 ರಂದು ಫಲಿತಾಂಶ ಹೊರಬಿದ್ದ ಸಮಯದಲ್ಲಿಒಎಮ್‌ಆರ್‌ತಿದ್ದುಪಡಿಯಾಗಿರುವು ದು ಹಾಗೂ ಒಂದು ಹುದ್ದೆಗೆ ಬರೊಬ್ಬರಿ 80 ಲಕ್ಷಕ್ಕೆ ಬೇಡಿಕೆಇಟ್ಟಿರುವುದು ಬೆಳಕಿಗೆ ಬಂದಿರುವು ನಾಚಿಕೆಗೆಡಿನತನಕ್ಕೆ ಹಿಡಿದಕನ್ನಡಿಯಾಗಿದೆಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ವಿಜಯಕುಮಾರ್‌ಆರ್, ಗಗನ್, ಹೇಮಂತ್, ಚಂದೂ, ಪ್ರಜ್ವಲ್, ರವಿ ಇದ್ದರು.
Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್


0 ಕಾಮೆಂಟ್‌ಗಳು