ಆಗಸ್ಟ್ 8ರಿಂದ ಜೀ ಕನ್ನಡದಲ್ಲಿ 'ಹಳ್ಳಿ ಪವರ್ ರಿಲೋಡೆಡ್! ಸಿಟಿಯಿಂದ ಹಳ್ಳಿಯತ್ತ ಸ್ಪರ್ಧಿಗಳ ಹೊಸ ಪಯಣ

ಬೆಂಗಳೂರು:ಜೀ ಕನ್ನಡ ತನ್ನ ಪ್ರೇಕ್ಷಕರಿಗಾಗಿ 'ಹಳ್ಳಿ ಪವರ್ ರಿಲೋಡೆಡ್' ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸಲು ಸಜ್ಜಾಗಿದೆ. ಗ್ರಾಮೀಣ ಕರ್ನಾಟಕದ ಸಂಸ್ಕೃತಿ, ಬದುಕಿನ ಸೊಗಡು ಮತ್ತು ಸವಾಲುಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಆತ್ಮವಿಶ್ವಾಸ, ಒಗ್ಗಟ್ಟು ಹಾಗೂ ಜೀವನದ ಹೊಸ ಅನುಭವಗಳನ್ನು ಅನಾವರಣಗೊಳಿಸಲಿದೆ.ಈ ಸ್ಪರ್ಧಿಗಳಿಗೆ ಟೆಲಿವಿಷನ್, ಮೊಬೈಲ್, ಇಂಟರ್ನೆಟ್ ಸೇರಿದಂತೆ ಯಾವುದೇ ಐಷಾರಾಮಿ ಸೌಲಭ್ಯಗಳು ಸಿಗುವುದಿಲ್ಲ ಮತ್ತು ಹಳ್ಳಿಯ ಸರಳ ಜೀವನಕ್ಕೆ ಒಗ್ಗಬೇಕು ಹಾಗು ಕುಟುಂಬದವರಿಂದ ದೂರವಿರಬೇಕು. 

ಕೃಷಿ ಕೆಲಸ, ಜಾನುವಾರುಗಳ ಆರೈಕೆ ಅಡುಗೆ ಮನೆಯ ಜವಾಬ್ದಾರಿಗಳು, ಹಳ್ಳಿಯ ದಿನನಿತ್ಯದ ಕಠಿಣ ಕೆಲಸಗಳು...
ಸವಾಲೂ ಸ್ಪರ್ಧಿಗಳ ದೈಹಿಕ ಸಾಮರ್ಥ್ಯ ಹಾಗು ಮಾನಸಿಕ ಸ್ತಿಮಿತತೆಯನ್ನು ಪರೀಕ್ಷಿಸಲಿದೆ. ಎಲ್ಲರ ಅಚ್ಚುಮೆಚ್ಚಿನ ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಅವರು ಹಳ್ಳಿ ಪವ‌ರ್ ಶೋ ನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸ್ನೇಹ ಹೆಚ್, ಬಿಬಿ ಹಾಜಿರಾ, ಏಂಜೆಲೀನ್, ರಿಗ್ಯಾ ರಾಜಶ್ರೀ, ದರ್ಶಿನಿ ಗೌಡ,
ಪೂಜಾ ಚಂದ್ರಶೇಖರ್, ಅನಿಷಾ ಲಕ್ಷ್ಮಣ್, ಸುಷ್ಮಾ ತೊಗರೆ, ತೇಜಸ್ವಿನಿ, ಅಂಕಿತ ದೇವ್, ಪೂರ್ವಿಕ ಆರ್ ಕೆ. ಚಿತ್ರಶ್ರೀ, ಪೂರ್ವ ವೈ, ರಚನಾ, ನಿಖಿತಾ ಸ್ವಾಮಿ, ನಿವೇದಿತಾ ರೈ ಹೀಗೆ ಸಿಟಿ ಯಲ್ಲಿ ಬೆಳೆದ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ಈ ಹೊಸ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ, ಸ್ಪರ್ಧಿಗಳ
ನಡುವಿನ ಸ್ನೇಹ, ಎದುರಾಗುವ ಸವಾಲುಗಳು, ಗೆಲುವು-ಸೋಲು, ಆತ್ಮವಿಶ್ವಾಸ ಹಾಗೂ ಅವರ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಪ್ರೇಕ್ಷಕರು ಕಣ್ಣುಂಬಿಕೊಳ್ಳಲಿದ್ದಾರೆ. 'ಹಳ್ಳಿ ಪವ‌ರ್' ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಗುರಿಯೊಂದಿಗೆ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಅವರ ಈ ರೋಚಕ ಪಯಣ ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ಸ್ಫೂರ್ತಿಯನ್ನೂ ಸಹ ನೀಡಲಿದೆ.

ಆಗಸ್ಟ್ 8ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗೋ 'ಹಳ್ಳಿ ಪವರ್ ರಿಲೋಡೆಡ್ * ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಿ.





ಸಿನಿಮಾ -







Santoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 

0 ಕಾಮೆಂಟ್‌ಗಳು